ಪ್ರಧಾನಿಯಿಂದ ಬಡವರಿಗೆ ಬಂಪರ್ ಕೊಡುಗೆ! Pm awas yojana new update

WhatsApp Group Join Now
Telegram Group Join Now       

Pm awas yojana new update: ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, 2024 ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಜೂನ್ 10ನೇ ತಾರೀಕಿನಂದು ಹೊಸ ಸಚಿವ ಸಂಪುಟದ ಮೊದಲನೆಯ ಸಭೆಯು ಸೋಮವಾರದಂದು ಮೋದಿ ಅವರ ನಿವಾಸದಲ್ಲಿ ನಡೆಯಿತು.ಮೂರು ಕೋಟಿ ಹೆಚ್ಚುವರಿ ಮನೆಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲು ನಿರ್ಧಾರ ಮಾಡಲಾಯಿತು.ಇದರ ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಕೊನೆಯವರೆಗೂ ಓದಿ.

ಈ ನಮ್ಮ ಮಾದ್ಯಮದಲ್ಲಿ ದಿನನಿತ್ಯ ಸುದ್ದಿಗಳು ಮತ್ತು ಉದ್ಯೋಗಗಳ ಬಗ್ಗೆ ಪ್ರಕಟಣೆ ಮಾಡಲಾಗುತ್ತದೆ. ಮತ್ತು ಸರ್ಕಾರಿ ನೌಕರಿ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ. ಹಾಗೂ ರೈತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ನಮ್ಮ ಕರ್ನಾಟಕ ಡೈಲಿ ಅಪ್ಡೇಟ್ ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿ ಪ್ರಕಟಿಸುವುದಿಲ್ಲ. ಆದ್ದರಿಂದ ದಿನಾಲೂ ವಿಸಿಟ್ ಮಾಡಲು ಪ್ರಯತ್ನಿಸಿ. ಮತ್ತು ನಮ್ಮ ವಾಟ್ಸಪ್ಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.

ಇದು 2015 ರಲ್ಲಿ ಭಾರತ ಸರ್ಕಾರದಿಂದ ಪ್ರಾರಂಭವಾದ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಬಡ ಕುಟುಂಬಗಳಿಗೆ ಮನೆಯನ್ನು ನಿರ್ಮಿಸುವುದು. ಈ ಯೋಜನೆ ಗ್ರಾಮೀಣ ಪ್ರದೇಶಗಳಿಗೆ ಮುಖ್ಯ ಪ್ರಯೋಜನಕಾರಿ ಆಗಿದೆ. ಈ ಯೋಜನೆಯಡಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ, 4.21 ಕೋಟಿ ಮನೆಗಳನ್ನು ನಿರ್ಮಿಸಿದೆ. ನೀವು ಕೂಡ ಮನೆಯನ್ನು ನಿರ್ಮಿಸಿಕೊಳ್ಳಬೇಕು. ಎಂದುಕೊಂಡಿದ್ದರೆ ಮತ್ತು ಈ ಯೋಜನೆಗೆ ಅರ್ಹರಿದ್ದರೆ ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

Pm awas yojana new update

Pm awas yojana new update ಅರ್ಹತೆ :

WhatsApp Group Join Now
Telegram Group Join Now       

ಅರ್ಜಿ ಸಲ್ಲಿಸುವ ಮೊದಲು ನೀವು ಇದರ ಅರ್ಹತೆ ಮತ್ತು ಇದರ ಪ್ರಯೋಜನಗಳ ಬಗ್ಗೆ ತಿಳಿಯಬೇಕು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎರಡು ವಿಧಗಳಿವೆ- ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ (PMAY-U). ಯೋಜನೆಯ ಮೂಲಕ ಜನರು ವಾಸಿಸುವ ಮನೆಗಳನ್ನು ಪಡೆಯಬಹುದು. ಭೂಮಿ ಹೊಂದಿರುವ ಮತ್ತು ಮನೆ ನಿರ್ಮಿಸಲು ಬಯಸುವ ಜನರಿಗೆ ಆರ್ಥಿಕ ನೆರವು ನೀಡುತ್ತದೆ.

ಈ ಯೋಜನೆಯಡಿಯಲ್ಲಿ, ಸರ್ಕಾರವು ಗೃಹ ಸಾಲಗಳ ಮೇಲೆ ಸಬ್ಸಿಡಿಗಳನ್ನು ನೀಡುತ್ತದೆ. ಸಬ್ಸಿಡಿ ಮೊತ್ತವು ಮನೆಯ ಗಾತ್ರ ಮತ್ತು ಆದಾಯದ ಮಟ್ಟವನ್ನು ಅವಲಂಬಿಸಿರುತ್ತದೆ. ಯೋಜನೆಯ ಮೂಲಕ ಬ್ಯಾಂಕುಗಳಲ್ಲಿ ಗೃಹ ಸಾಲವನ್ನು ನೀಡಲಾಗುವುದು.

ಕಿಸಾನ್ 17ನೇ ಕಂತಿನ ಹಣ ಬಿಡುಗಡೆಗೆ ಮೋದಿ ರೆಡಿ!!

ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಅರ್ಜಿದಾರರು ಸಹ ಭಾರತೀಯ ಪ್ರಜೆಯಾಗಿರಬೇಕು. 18 ಲಕ್ಷದವರೆಗಿನ ವಾರ್ಷಿಕ ಆದಾಯವಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಭ್ಯವಿದೆ. ಇದು ವಾರ್ಷಿಕ ಆದಾಯದ ಪ್ರಕಾರವೂ ಬದಲಾಗುತ್ತದೆ. PMAY ಯೋಜನೆಗೆ ಪ್ರಾಥಮಿಕ ಅರ್ಹತೆಯ ಅವಶ್ಯಕತೆಯೆಂದರೆ, ಅರ್ಜಿ ಸಲ್ಲಿಸುವ ಮೊದಲು ವ್ಯಕ್ತಿಯು ಯಾವುದೇ ಪಕ್ಕಾ ಮನೆಯನ್ನು ಹೊಂದಿರಬಾರದು. ಕುಟುಂಬದ ಯಾವುದೇ ಸದಸ್ಯರಿಗೂ ಸರ್ಕಾರಿ ನೌಕರಿ ಇರಬಾರದು.

Pm awas yojana new update ಅಗತ್ಯವಿರುವ ದಾಖಲೆಗಳು

  • ಗುರುತಿನ ಚೀಟಿ
  • ವಿಳಾಸ ಪುರಾವೆ
  • ಆದಾಯ ಅನುಪಾತ
  • ಆಸ್ತಿ ದಾಖಲೆಗಳು

ರೈತರಿಗೆ ಬಿಗ್‌ ಅಪ್ಡೇಟ್! ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ‌ 17ನೇ ಕಂತಿನ ಹಣ

Pm awas yojana new update ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಈ ಯೋಜನೆಗೆ ನೀವು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹಂತ 1: ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ–https://pmaymis.gov.in/

ಹಂತ 2: ಮುಖಪುಟದಲ್ಲಿ, PM awas yojana ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಎಲ್ಲಾ ಮಾಹಿತಿಯೊಂದಿಗೆ ನೋಂದಾಯಿಸಿ.

ಹಂತ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಹಂತ 5: ಪರಿಶೀಲಿಸಿ ಮತ್ತು ಸಲ್ಲಿಸಿ

ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಸಿಎಸ್‌ಸಿ(CSC) ಕೇಂದ್ರಕ್ಕೆ ಭೇಟಿ ನೀಡಿ.

ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ಉತ್ತಮ ಮಾಹಿತಿ ದೊರೆತಿದೆ ಎಂದು ಬಾವಿಸುತ್ತ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತ ಮಿತ್ರ ಮತ್ತು ಬಂದುಗಳಿಗೂ ಶೇರ್ ಮಾಡಿ

Leave a Comment