ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೇಮಕಾತಿ 2024| Hutti Gold Mines Company recruitment 2024| ಇಲ್ಲಿದೆ ನೋಡಿದರೆ ಸಂಪೂರ್ಣ ಮಾಹಿತಿ..!

WhatsApp Group Join Now
Telegram Group Join Now       

Hutti Gold Mines Company recruitment 2024: ಭಾರತ ದೇಶದಲ್ಲಿ ಚಿನ್ನ ಉತ್ಪಾದನೆಯಲ್ಲಿ ಆಗ್ರ ಸ್ಥಾನವನ್ನು ಹೊಂದಿರುವ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿಗಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಗಳ ಅನುಸಾರ ವಯೋಮಿತಿ ವಿದ್ಯಾರ್ಹತೆ ವೇತನ ಶ್ರೇಣಿ ಅರ್ಜಿ ಶುಲ್ಕ ಆಯ್ಕೆ ವಿಧಾನ ಇನ್ನಿತರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

Hutti Gold Mines Company recruitment 2024 ಸಂಕ್ಷಿಪ್ತ ವಿವರ :

ಹುದ್ದೆಗಳು :

ಸೆಕ್ಯೂರಿಟಿ ಗಾರ್ಡ್

WhatsApp Group Join Now
Telegram Group Join Now       

ಐಟಿಐ ಫಿಟ್ಟರ್ ದರ್ಜೆ-2 (ಭೂ ಅನ್ವೇಷಣೆ ವಿಭಾಗ)

ಭದ್ರತಾ ನಿರೀಕ್ಷಕರು

ಸಹಾಯಕ ಫೋರ್ಮೆನ್ (ಸಿವಿಲ್)

ಐಟಿಐ ಎಲೆಕ್ಟ್ರಿಕಲ್ ದರ್ಜೆ-2  (ತಾಂತ್ರಿಕ ವಿಭಾಗ)

ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ)

ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ)

ಸಹಾಯಕ ಫೋರ್ಮೆನ್ ( ಮೆಕ್ಯಾನಿಕಲ್)

ಸಹಾಯಕ ಫೋರ್ಮೆನ್ ( ಡೈಮಂಡ್ರಿಲ್ಲಿಂಗ್ ಭೂ ಕೆಳಮ್ಮೈ ವಜ್ರಬೈರಿಗೆ)

ಸಹಾಯಕ ಪೋರ್ಮೇನ್ (ಭೂ ಗರ್ಭಶಾಸ್ತ್ರ)

ಲ್ಯಾಬ್ ಸಹಾಯಕ

ಸಹಾಯಕ ಪೋರ್ಮೇನ್ (ಲೋಹ ಶಾಸ್ತ್ರ)

ಸಹಾಯಕ ಪೋರ್ಮೇನ್ (ಗಣಿ)

ಒಟ್ಟು ಹುದ್ದೆಗಳು: 168

ಉದ್ಯೋಗ ಸ್ಥಳ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸಬೇಕು.

ಶೈಕ್ಷಣಿಕ ಅರ್ಹತೆ:

ಸೆಕ್ಯೂರಿಟಿ ಗಾರ್ಡ್- ದ್ವಿತೀಯ ಪಿಯುಸಿ

ಐಟಿಐ ಫಿಟ್ಟರ್ ದರ್ಜೆ-2 (ಭೂ ಅನ್ವೇಷಣೆ ವಿಭಾಗ)- ಎರಡು ವರ್ಷಗಳ ಐಟಿಐ (ಫಿಟ್ಟರ್)

ಭದ್ರತಾ ನಿರೀಕ್ಷಕರು- ಮೂರು ವರ್ಷಗಳ ಯಾವುದೇ ಪದವಿ

ಸಹಾಯಕ ಫೋರ್ಮೆನ್ (ಸಿವಿಲ್)- ಮೂರು ವರ್ಷಗಳ ಡಿಪ್ಲೋಮಾ (ಸಿವಿಲ್)

ಐಟಿಐ ಎಲೆಕ್ಟ್ರಿಕಲ್ ದರ್ಜೆ-2  (ತಾಂತ್ರಿಕ ವಿಭಾಗ)- ಎರಡು ವರ್ಷಗಳ ಐಟಿಐ (ಎಲೆಕ್ಟ್ರಿಕಲ್)

ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ)- ಎರಡು ವರ್ಷಗಳ ಐಟಿಐ (ಫಿಟ್ಟರ್)

ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ)- ಎರಡು ವರ್ಷಗಳ ಐಟಿಐ (ಫಿಟ್ಟರ್)

ಸಹಾಯಕ ಫೋರ್ಮೆನ್ ( ಮೆಕ್ಯಾನಿಕಲ್)- ಮೂರು ವರ್ಷಗಳ ಡಿಪ್ಲೋಮಾ (ಮೆಕ್ಯಾನಿಕಲ್)

ಸಹಾಯಕ ಫೋರ್ಮೆನ್ ( ಡೈಮಂಡ್ರಿಲ್ಲಿಂಗ್ ಭೂ ಕೆಳಮ್ಮೈ ವಜ್ರಬೈರಿಗೆ)- ಮೂರು ವರ್ಷಗಳ ಡಿಪ್ಲೋಮಾ (ಡ್ರಿಲ್ಲಿಂಗ್ ಟೆಕ್ನಾಲಜಿ)

ಸಹಾಯಕ ಪೋರ್ಮೇನ್ (ಭೂ ಗರ್ಭಶಾಸ್ತ್ರ)- ಮೂರು ವರ್ಷಗಳ ಬಿಎಸ್ಸಿ (ಭೂ ಗರ್ಭ ಶಾಸ್ತ್ರ)

ಲ್ಯಾಬ್ ಸಹಾಯಕ- ಮೂರು ವರ್ಷಗಳ ಬಿ ಎಸ್ ಸಿ (ರಾಸಾಯನಶಾಸ್ತ್ರ)

ಸಹಾಯಕ ಪೋರ್ಮೇನ್ (ಲೋಹ ಶಾಸ್ತ್ರ)- ಮೂರು ವರ್ಷಗಳ ಡಿಪ್ಲೋಮಾ (ಮೆಟಲರ್ಜಿ)

ಸಹಾಯಕ ಪೋರ್ಮೇನ್ (ಗಣಿ)- ಮೂರು ವರ್ಷಗಳ ಡಿಪ್ಲೋಮಾ ( ಮೈನಿಂಗ್)

ವೇತನ ಶ್ರೇಣಿ:

ಸೆಕ್ಯೂರಿಟಿ ಗಾರ್ಡ್ – 20,920 ರಿಂದ 42,660

ಐಟಿಐ ಫಿಟ್ಟರ್ ದರ್ಜೆ-2 (ಭೂ ಅನ್ವೇಷಣೆ ವಿಭಾಗ) – 20,920 ರಿಂದ 42,660

ಭದ್ರತಾ ನಿರೀಕ್ಷಕರು – 25,000 ರಿಂದ 48,020

ಸಹಾಯಕ ಫೋರ್ಮೆನ್ (ಸಿವಿಲ್) – 25,000 ರಿಂದ 48,020

ITI Electrical ದರ್ಜೆ -2  (ತಾಂತ್ರಿಕ ವಿಭಾಗ) 20,920 ರಿಂದ 42,660

ITI Fitter ದರ್ಜೆ-2 (ಲೋಹ ವಿಭಾಗ) – 20,920 ರಿಂದ 42,660

ITI Fitter ದರ್ಜೆ-2 (ಗಣಿ ವಿಭಾಗ) – 20,920 ರಿಂದ 42,660

ಸಹಾಯಕ ಫೋರ್ಮೆನ್ ( ಮೆಕ್ಯಾನಿಕಲ್) – 25,000 ರಿಂದ 48,020

ಸಹಾಯಕ ಫೋರ್ಮೆನ್ ( ಡೈಮಂಡ್ರಿಲ್ಲಿಂಗ್ ಭೂ ಕೆಳಮ್ಮೈ ವಜ್ರಬೈರಿಗೆ) – 25,000 ರಿಂದ 48,020

ಸಹಾಯಕ ಪೋರ್ಮೇನ್ (ಭೂ ಗರ್ಭಶಾಸ್ತ್ರ) – 25,000 ರಿಂದ 48,020

ಲ್ಯಾಬ್ ಸಹಾಯಕ – 25,000 ರಿಂದ 48,020

ಸಹಾಯಕ ಪೋರ್ಮೇನ್ (ಲೋಹ ಶಾಸ್ತ್ರ) – 25,000 ರಿಂದ 48,020

ಸಹಾಯಕ ಪೋರ್ಮೇನ್ (ಗಣಿ) – 25,000 ರಿಂದ 48,020

ವಯೋಮಿತಿ :

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.
ಪ್ರವರ್ಗ 2A, 2B, 3A, 3B, ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹೊಂದಿರಬಹುದು.
ಪ.ಜಾ ಪ.ಪ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಹೊಂದಿರಬಹುದು.

ಆಯ್ಕೆ ವಿಧಾನ:

ವೃತ್ತಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ದೈಹಿಕ ಸಹಿಷ್ಣುತ ಪರೀಕ್ಷೆಯನ್ನು ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿ.
ಪ್ರವರ್ಗ 2a 2b 3a 3b ಅಭ್ಯರ್ಥಿಗಳಿಗೆ 300 ರೂಪಾಯಿ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಮಾಜಿ ಸೈನಿಕ ವಿಕಲಚೇತನ ಅಭ್ಯರ್ಥಿಗಳಿಗೆ ನೂರು ರೂಪಾಯಿ.

ಇದನ್ನು ಒಮ್ಮೆ ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನೇಮಕಾತಿ 2024| KEA RGUHS Recruitment 2024

ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 19-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 03-05-2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ- 03-05_2024

Hutti Gold Mines Company recruitment 2024 ಸಂಪೂರ್ಣ ವಿವರ:

Hutti Gold Mines Company recruitment 2024

ಭಾರತದಲ್ಲಿ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ವಾರ್ಷಿಕವಾಗಿ ಅಂದಾಜು ರೂ.830 ಕೋಟಿಗಳ ವಹಿವಾಟು ಹೊಂದಿರುವ ಮತ್ತು ತನ್ನ ಸ್ಥಾವರ/ಗಣಿಯನ್ನು ವಿಸ್ತರಣೆ ಮಾಡುವ ಮಹತ್ವಕಾಂಕ್ಷೆ ಯೋಜನೆಯನ್ನು ಹೊಂದಿರುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ವಿವಿಧ ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕ( ಸ್ಥಳೀಯ) ವೃಂದ( Kalyana Karnataka (Local) Cadre) ದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

Hutti Gold Mines recruitment Company 2024 ಸೂಚನೆ:

• ವೃತ್ತಿ/ಕಂಪ್ಯೂಟರ್ ಆಧಾರಿತ ಪರೀಕ್ಷೆ(Computer Based Test – CBT)ನಡೆಸುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಂಪನಿಯ ವೆಬ್ಸೈಟ್ ಹಾಗೂ ಇಮೇಲ್ ಎಸ್ಎಂಎಸ್ ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಹಣದಲ್ಲಿ ಹಾಜರಾಗಬೇಕು.

• ವೃತ್ತಿ ಕಂಪ್ಯೂಟರ್ ಆಧಾರಿತ ಪರೀಕ್ಷೆ(Computer Based Test – CBT)ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಐದು ಅಭ್ಯರ್ಥಿಗಳನ್ನು ಮಾತ್ರ ದೈಹಿಕ ಸಹಿಷ್ಣುತ ಪರೀಕ್ಷೆಗೆ ಹಾಜರಾಗಲು ಸಂಬಂಧಿಸಿದವರಿಗೆ ದೈಹಿಕ ಮಹೇಶ್ ಮತ್ತು ಪರೀಕ್ಷೆಯ ವಿವರಗಳು ಮಾಹಿತಿಯನ್ನು ಕಂಪನಿಯ ವೆಬ್ಸೈಟ್ ಮತ್ತು ಇ-ಮೇಲ್ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ.

• ಅರಹತ ಪಟ್ಟಿಯನ್ನು ತಯಾರಿಸಲು ಪ್ರತಿ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 50ರಷ್ಟು ಹಾಗೂ ನೇಮಕಾತಿ ಪ್ರಾಧಿಕಾರವು ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(Computer Based Test – CBT)ಯಲ್ಲಿ ಗಳಿಸಿದ ಒಟ್ಟು ಅಂಕಗಳು 50 ಅಂಕಗಳನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆದರದ ಮೇಲೆ ಪ್ರಕಟಿಸಲಾಗುವುದು.

ಇದನ್ನು ಒಮ್ಮೆ ಓದಿ : ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2024| District Court recruitment 2024! ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ..!

Hutti Gold Mines Company recruitment 2024 ಷರತ್ತುಗಳು ಮತ್ತು ನಿಬಂಧನೆಗಳು:

1. ಕಾನೂನು ರೀತಿಯ ಸ್ಥಾಪಿಸಲ್ಪಟ್ಟಿರುವ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಇಲಾಖೆಯ ವತಿಯಿಂದ ಮೂರು ವರ್ಷಗಳ ಡಿಪ್ಲೋಮಾ, ಪೂರ್ವ ವಿಶ್ವವಿದ್ಯಾಲಯ ಮಂಡಳಿಯಿಂದ ಪಿಯುಸಿ ಹಾಗೂ ಕೈಗಾರಿಕೆ ತರಬೇತಿ ಸಂಸ್ಥೆಯಿಂದ ಎರಡು ವರ್ಷಗಳ ಐಟಿಐ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

2. ಅಭ್ಯರ್ಥಿಯು ಮಾಜಿ ಸೈನಿಕ ವಿಧವೆ ಅಂಗವಿಕಲರು ಹಾಗೂ ಇನ್ನಿತರಿಗೆ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗುವುದು.

3. ಕರ್ನಾಟಕ ಸರಕಾರದ ಅಧಿಸೂಚನೆಯಂತೆ ಕಲ್ಯಾಣ ಕರ್ನಾಟಕ ಪ್ರದೇಶ( ಬೀದರ್ ಕಲಬುರ್ಗಿ ರಾಯಚೂರು, ಕೊಪ್ಪಳ ಯಾದಗಿರಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು) ನೇಮಕಾತಿ ಪ್ರಕ್ರಿಯೆ ಅಡಿಯಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ.

4. ಕಲ್ಯಾಣ ಕರ್ನಾಟಕ ಜಿಲ್ಲೆಯ ಅಭ್ಯರ್ಥಿಗಳು ಇಚ್ಚಿಸಿದಲ್ಲಿ ಕಲ್ಯಾಣ ಕರ್ನಾಟಕ ವೃಂದಕ್ಕೆ ಮತ್ತು ಸ್ಥಳೀಯತರ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

5. ಸದಾರಿ ನೇಮಕಾತಿಗಳನ್ನು ಕರ್ನಾಟಕ ಸರಕಾರದ ಪರಿಷ್ಕೃತ ಆದೇಶ ದಿನಾಂಕ 8.3.2023ರ ರೋಸ್ಟರ್ ಮೀಸಲಾತಿ ನಿಯಮಗಳ ಅನ್ವಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

6. ಮಾಜಿ ಸೈನಿಕ ತೃತೀಯಲಿಂಗ ಮಹಿಳೆ ಮತ್ತು ಅಂಗವಿಕಲ ಅಭ್ಯರ್ಥಿಗಳು ಲಭ್ಯವಿರೋದು ಪಕ್ಷದಲ್ಲಿ ಅದೇ ವರ್ಗದ ಇತರೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗುವುದು.

7. ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ಅಂಚೆ ವಿಳಾಸವು ಅಂತಿಮವಾಗಿದ್ದು ನಂತರ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ

8. ನೇಮಕಾತಿ ಪ್ರಾಧಿಕಾರವು ಹಾಜರುಪಡಿಸಲು ತಿಳಿಸಿದ ಎಲ್ಲ ಮೂಲ ಪ್ರಮಾಣ ಪತ್ರಗಳು ದಾಖಲೆಗಳು ಮುಂತಾದವುಗಳನ್ನು ನಿಗದಿಪಡಿಸಿದ ದಿನಾಂಕದಂದು ದೃಢೀಕೃತ ಪತ್ರಗಳೊಂದಿಗೆ ಹಾಜರುಪಡಿಸಬೇಕು.

9. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ಅಭ್ಯರ್ಥಿಗಳು ನಮೂನೆ ಒಂದರಲ್ಲಿ ಮೇಲುತ್ತರಕ್ಕೆ ಸೇರಿಲ್ಲವೆಂದು ದೃಢೀಕರಿಸಿ ಸಕ್ಷಮ ಪ್ರಾಧಿಕಾರಗಳಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು

10. ಅಂಗವಿಕಲ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಸಹಿಷ್ಣುತ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಲಾಗಿದೆ.

11. ಎಲ್ಲ ಹುದ್ದೆಗಳಿಗೆ ಕನ್ನಡ ಭಾಷೆ ಜ್ಞಾನ ಕಡ್ಡಾಯವಾಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ದ್ವಿತೀಯ ಭಾಷೆಯನ್ನು ತೆಗೆದುಕೊಂಡು ಉತ್ತೀರ್ಣರಾಗಿದ್ದಲ್ಲಿ ಕಂಪನಿ ನಡೆಸುವ ಕನ್ನಡ ಭಾಷೆ ಪರೀಕ್ಷೆ ಯಿಂದ ವಿನಾಯಿತಿಯನ್ನು ನೀಡಲಾಗಿದೆ. ನಿಯಮಗಾತಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ನಡೆಸುವ ಕನ್ನಡ ಭಾಷೆ ಪರೀಕ್ಷೆ ಯನ್ನು ತಮ್ಮ ಕಾಯಂ ಪೂರ್ವ ಅವಧಿಯು ಮುಗಿಯುವ ರೊಳಗೆ ಉತ್ತೀರ್ಣರಾಗಿರಬೇಕು ಇಲ್ಲವಾದಲ್ಲಿ ಅವರ ಕಾಯಂ ಪೂರ್ವ ಅವಧಿಯನ್ನು ವಿಸ್ತರಿಸಲಾಗುವುದು.

12. ಮೇಲೆ ತಿಳಿಸಿರುವ ಹುದ್ದೆಗಳ ಸಂಖ್ಯೆಗಳು ತಾತ್ಕಾಲಿಕವಾಗಿದ್ದು, ಅವಶ್ಯಕತೆಗಳ ಆಧಾರದ ಮೇಲೆ ಮಾರ್ಪಾಡು ಮಾಡುವ ಹಕ್ಕನ್ನು ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ.

13. ಯಾವುದೇ ಕಾರಣಕ್ಕೂ ನೀಡದೆ ಯಾವುದೇ ಅಭ್ಯರ್ಥಿಗಳ ನೇಮಕಾತಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ.

14. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯನಾಗಿರಬೇಕು.

15. ಆಯ್ಕೆಯಾದ ಅಭ್ಯರ್ಥಿಯ ನೇಮಕಾತಿಯು ನೇಮಕಾತಿ ಪ್ರಾಧಿಕಾರದಿಂದ ರಚಿಸಲ್ಪಡುವ ಸಮಿತಿಯಿಂದ ವೈದ್ಯಕೀಯವಾಗಿ ಅರ್ಹತೆ ಪರೀಕ್ಷೆಯ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಮತ್ತು ಅಂತಿಮವಾಗಿರುತ್ತದೆ.

16. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸುವ ನಂತರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು.

17. ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಯು ಪೊಲೀಸ್ ಇಲಾಖೆಯಿಂದ ಪೂರ್ವ ಚರಿತ್ರೆ ಪರಿಶೀಲನ ವರದಿಯ ಶರತ್ತಿಗೆ ಒಳಪಟ್ಟಿರುತ್ತದೆ.

18. ನೇಮಕಾತಿ ಪ್ರಕ್ರಿಯೆಯ ಬಗ್ಗೆ ಅಭ್ಯರ್ಥಿಗಳಿಂದ ಯಾವುದೇ ಪತ್ರ ವ್ಯವಹಾರ ಹಾಗೂ ವಿಚಾರಣೆ ಅವಕಾಶ ಇರುವುದಿಲ್ಲ

19. ನೇಮಕಾತಿಗಾಗಿ ಯಾವುದೇ ರೀತಿಯ ಶಿಫಾರಸು ತಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಅರ್ಹತೆಗೊಳಿಸಲಾಗುತ್ತದೆ

ಇದನ್ನು ಕೂಡ ಓದಿ : Pradhanmantri Kaushalya Vikas Yojana 2024| ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(PMKVY)2024| ಪಠ್ಯಕ್ರಮ ಅರ್ಹತೆಯ ನೋಂದಣಿ ಪ್ರಕ್ರಿಯೆ! ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ..!

20. ಅಭ್ಯರ್ಥಿ ತಮ್ಮ ವ್ಯಕ್ತಿಗತ ವಿವರ ಮತ್ತು ಶೈಕ್ಷಣಿಕ ವಿದ್ಯಾರ್ಥಿಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ, ತೃತೀಯ ಲಿಂಗ ಪ್ರಮಾಣ ಪತ್ರ ಅಂಗವಿಕಲ ಅಭ್ಯರ್ಥಿ ಪ್ರಮಾಣ ಪತ್ರ ಡಿಸ್ಚಾರ್ಜ್ ಪ್ರಮಾಣ ಪತ್ರ ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ಸಕ್ಶಮ ಪ್ರಾಧಿಕಾರದಿಂದ ಪಡೆದ ಅನುಚ್ಛೇದನ 372 ಸ್ಥಳೀಯ ಪ್ರಮಾಣ ಪತ್ರ, ಇತ್ಯಾದಿ ಪ್ರತಿಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿ ಇರುವಂತೆ ಪಡೆದಿಟ್ಟುಕೊಂಡು ಅರ್ಜಿಯೊಂದಿಗೆ ಕಡ್ಡಾಯವಾಗಿ ಕಂಪನಿಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದರೊಂದಿಗೆ ಆನ್ಲೈನ್ ಮೂಲಕ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್:

https://huttigold.karnataka.gov.in

Leave a Comment