Anna bhagya dbt status check: ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ರಾಜ್ಯ ಸರ್ಕಾರ ತನ್ನ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದು ಎಂಟು ತಿಂಗಳು ಕಳೆದಿವೆ. ಇಲ್ಲಿಯವರೆಗೂ ಫಲಾನುಭವಿಗಳಿಗೆ ಕೊಡಬಹುದಾದಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಾ ಬಂದಿದೆ.
ಕಳೆದ 8 ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ಎಲ್ಲ ಫಲಾನುಭವಿಗಳ ಖಾತೆಗೆ ಸರ್ಕಾರ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಆದರೆ ಸರ್ಕಾರ ಈಗಾಗಲೇ ಸಾಕಷ್ಟು ಜನರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ್ದು, ಅವರಿಗೆ ಮೇ ತಿಂಗಳ ಅನ್ನಭಾಗ್ಯ ಹಣವು ಜಮಾ ಆಗುವುದಿಲ್ಲ.
ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ನೀಡಲಾಗುತ್ತಿತ್ತು, ಆದರೆ ಇಂದಿನ ದಿನಗಳಲ್ಲಿ ಉತ್ತಮ ಆದಾಯವನ್ನು ಹೊಂದಿರುವವರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯುತ್ತಿದ್ದಾರೆ.
ಇದನ್ನು ಗಮನಿಸಿದ ನಂತರ ಸರ್ಕಾರ ಅಂಥವರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಹಳ ಸ್ಟ್ರಿಕ್ಟ್ ನಡೆಸಿ ರದ್ದುಪಡಿಸಿದೆ.
ಅನ್ನಭಾಗ್ಯ ಯೋಜನೆ ಹಣ ಏಪ್ರಿಲ್ 20 ನೇ ತಾರೀಕಿನ ಒಳಗಡೆ ಎಲ್ಲಾರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಸಾಕಷ್ಟು ಜನರ ಖಾತೆಗೆ 680 ರೂಪಾಯಿಗಳು ಜಮಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಣ ಬಂದಿರುವ ಡಿಬಿಟಿ ಸ್ಟೇಟಸ್ ಅನ್ನು ಸಾಕಷ್ಟು ಜನ ಶೇರ್ ಮಾಡಿದ್ದಾರೆ. ನೀವೇನಾದರೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದರೆ, ನಿಮ್ಮ ಖಾತೆಗೆ ಹಣ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು.
ಆನ್ಲೈನ್ ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
DBT Karnataka ಆಪ್ ನಿಮ್ಮ ಮೊಬೈಲ್ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಗೆ ಬಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಿ.
ನಂತರ ನಾಲ್ಕು ಅಂಕೆಯ ಪಾಸ್ವರ್ಡ್ ರಚಿಸಿಕೊಳ್ಳಬೇಕು
ನೆನಪಿಟ್ಟುಕೊಳ್ಳುವಂಥ ಪಾಸ್ವರ್ಡ್ ಹಾಕಿ ಯಾಕಂದ್ರೆ ಪ್ರತಿ ಬಾರಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಲು ಇದೇ ಪಾಸ್ವರ್ಡ್ ಬಳಸಬೇಕು.
ಪಾಸ್ವರ್ಡ್ ಅನ್ನು ನೀಡಿದ ಬಳಿಕ ನಿಮಗೆ ಒಂದು ಪುಟ ಕಾಣಿಸುತ್ತದೆ.ಅಲ್ಲಿ ಪಾವತಿ ಸ್ಥಿತಿ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಈಗ ಸರ್ಕಾರದಿಂದ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಬಂದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ.
ಅನ್ನ ಭಾಗ್ಯ ಯೋಜನೆಯ ಹಣ ಯಾವಾಗ ಬಂದಿದೆ ಎಷ್ಟು ಬಂದಿದೆ ಎಂದು ತೋರಿಸುತ್ತದೆ.
ಇನ್ನು DBT ಸ್ಟೇಟಸ್ ಚೆಕ್ ಮಾಡಲು ಎರಡನೇ ಮಾರ್ಗ:
ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಈ ಸರ್ವಿಸ್ ವಿಭಾಗಕ್ಕೆ ಹೋಗಿ
ನಂತರ ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ
ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ
ಡಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ
ನಿಮ್ಮ ಜಿಲ್ಲೆಯನ್ನು ಸೆಲಕ್ಟ್ ಮಾಡಿ
ಈಗ ಡಿಬಿಟಿ ಸ್ಥಿತಿ ತಿಳಿದುಕೊಳ್ಳಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಮುಂದೆ ವರ್ಷ ತಿಂಗಳು ನಿಮ್ಮ ಆರ್ಸಿ ನಂಬರ್ ಮತ್ತು ಕ್ಯಾಪ್ಚ ಸಂಖ್ಯೆಯನ್ನು ಎಂಟರ್ ಮಾಡಿ ಗೋ ಎಂದು ಕ್ಲಿಕ್ ಮಾಡಿಕೊಳ್ಳಿ
ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕಾಣಿಸುತ್ತದೆ.
ಇದನ್ನು ಕೂಡ ಓದಿ : HOME LOAN : ಗೃಹ ಸಾಲ ಪಡೆಯುವವರಿಗೆ Good News, ಈ ಬ್ಯಾಂಕ್‌ಗಳಲ್ಲಿ ಕಡಿಮೆ EMI ನಲ್ಲಿ ಸಾಲ ಸಿಗುತ್ತದೆ.